ಜ್ಞಾನ ಲೋಕದ ದಿವ್ಯ ಬೆಳಕೆ
ಜ್ಞಾನ ಲೋಕದ ದಿವ್ಯ ಬೆಳಕೆ
ಚಂದ್ರಶೇಖರ ಗುರುವರ
ವೇದ ಶಾಸ್ತ್ರ ಪುರಾಣ ಪುಟದಲ್ಲಿ
ಚಿತ್ತ ಬೆಳಗಿದ ಚಂದಿರ
ಚಂದಿರ... ಚಂದಿರ...(2)
1) ನಿಮ್ಮ ಕಂಠದ ಮಧುರ ಪ್ರವಚನ
ಭಕ್ತರ ಮನ ಗೆದ್ದಿತು (2)
ಭಕ್ತಿ ಬೆಳಗಿಸಿ ಮುಕ್ತಿ ಕರುಣಿಸಿ (2)
ಭಕ್ತರನ್ನು ಉದ್ದರಿಸಿತು
ಉದ್ದರಿಸಿತು... ಉದ್ದರಿಸಿತು...
ಜ್ಞಾನ ಲೋಕದ ದಿವ್ಯ ಬೆಳಕೆ
ಚಂದ್ರಶೇಖರ ಗುರುವರ
ವೇದ ಶಾಸ್ತ್ರ ಪುರಾಣ ಪುಟದಲ್ಲಿ
ಚಿತ್ತ ಬೆಳಗಿದ ಚಂದಿರ
ಚಂದಿರ... ಚಂದಿರ...(2)
2) ಸಿದ್ದಾಂತ ಶಿಖಾಮಣಿಯನು
ನಾಡಿನಾದ್ಯದಿ ಭೋದಿಸಿ(2)
ಶುದ್ಧ ಭಾವದ ಸಿದ್ದರಾಗಿ (2)
ಬುದ್ಧಿ ಮತಿಯನು ಹರುಹಿದೆ(2)
ಹರುಹಿದ...ಹರುಹಿದೆ...
ಜ್ಞಾನ ಲೋಕದ ದಿವ್ಯ ಬೆಳಕೆ
ಚಂದ್ರಶೇಖರ ಗುರುವರ
ವೇದ ಶಾಸ್ತ್ರ ಪುರಾಣ ಪುಟದಲ್ಲಿ
ಚಿತ್ತ ಬೆಳಗಿದ ಚಂದಿರ
ಚಂದಿರ... ಚಂದಿರ...(2)
3)ಇಷ್ಟಲಿಂಗದ ಪೂಜೆ ಗೈದು
ಕಷ್ಟದೂರವ ಮಾಡಿದೆ(2)
ಪೂಜೆ ಪುನಸ್ಕಾರ ಮಾಡಿಸಿ (2)
ಪಾಪ ಕರ್ಮವ ದೂಡಿದೆ. (2)
ದೂಡಿದ... ದೂಡಿದೆ...
ಜ್ಞಾನ ಲೋಕದ ದಿವ್ಯ ಬೆಳಕೆ
ಚಂದ್ರಶೇಖರ ಗುರುವರ
ವೇದ ಶಾಸ್ತ್ರ ಪುರಾಣ ಪುಟದಲ್ಲಿ
ಚಿತ್ತ ಬೆಳಗಿದ ಚಂದಿರ
ಚಂದಿರ... ಚಂದಿರ...(2)
4)ನಿಮ್ಮ ಚರಣಕೆ ಶಿರವ ಬಾಗುವೆ
ನೀವೇ ತಂದೆ ತಾಯಿಯು(2)
ಬಂದು ಬಳಗವು ನೀವು ನಮಗೆ (2)
ನಿಮಗೆ ನಮ್ಮ ಪ್ರಣಾಮವು (2)
ಪ್ರಣಾಮವು....ಪ್ರಣಾಮವು...
ಜ್ಞಾನ ಲೋಕದ ದಿವ್ಯ ಬೆಳಕೆ
ಚಂದ್ರಶೇಖರ ಗುರುವರ
ವೇದ ಶಾಸ್ತ್ರ ಪುರಾಣ ಪುಟದಲ್ಲಿ
ಚಿತ್ತ ಬೆಳಗಿದ ಚಂದಿರ
ಚಂದಿರ... ಚಂದಿರ...(2)